Thursday, 7 August 2025

ಬೇಲಿಯೇ ಎದ್ದು ಹೊಲ ಮೇಯುತ್ತಿರಲು!!!

       ಚುನಾವಣೆಗಳಲ್ಲಿ ಅಕ್ರಮ ನಡೆಯುತ್ತಿವೆ ಎಂಬುದು ಇಂದು ಅಥವಾ ನಿನ್ನೆಯ ವಾದವಲ್ಲ ಆದರೆ ಚುನಾವಣಾ ಆಯೋಗವೇ ಮುಂದೆ ನಿಂತು ಅಕ್ರಮವನ್ನು ಮಾಡಲು ಅನುವು ಮಾಡಿಕೊಡಬಹುದು ಎಂಬುದು ಎಂದು ಕಂಡು ಕೇಳರಿಯದಂತಹ ವಿಷಯ ಈ ರೀತಿಯ ಚುನಾವಣಾ ಅಕ್ರಮ ಕೇವಲ ಚುನಾವಣಾ ಅಕ್ರಮವಾಗಿ ಉಳಿಯದೆ ಪ್ರಜಾಪ್ರಭುತ್ವದ ಆತ್ಮಕ್ಕೆ ಮಾಡಿದ ಘಾಸಿಯಾಗಿದೆ, ಚುನಾವಣಾ ಅಕ್ರಮದಿಂದ ಒಂದು ಲೋಕಸಭಾ ಕ್ಷೇತ್ರದ ಒಂದು ವಿಧಾನಸಭೆಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಅನಾಧಿಕೃತ ಮತದಾರರನ್ನು ಸೇರಿಸುವುದು ಎಂದರೆ ಆ ಇಡೀ ಲೋಕಸಭಾ ಕ್ಷೇತ್ರದ ಪರಿಣಾಮವನ್ನು ಮಾರ್ಪಡಿಸಿದಂತೆ, ಈ ಹಿಂದೆ ನಡೆಯುತ್ತಿದ್ದ ಚುನಾವಣಾ ಅಕ್ರಮಗಳಿಗಾಗಿ ನ್ಯಾಯವನ್ನು ಪಡೆಯಲು ನಮಗೆ ಚುನಾವಣಾ ಆಯೋಗ ಜೊತೆಯಾಗುತ್ತಿತ್ತು. ಆದರೆ ಈಗ ಬೇಲಿಯೇ ಎದ್ದು ಹೊಲ ಮೇಯುತ್ತಿರಲು ಯಾರಿಗೆ ಎಂದು ನಿಮ್ಮ ಬಿನ್ನಹ ತಲುಪಿಸುತ್ತೀರಾ.

ಇದು ಸಾಲದೆಂಬಂತೆ ಈ ದೇಶದ ವಿರೋಧ ಪಕ್ಷದ ನಾಯಕ ಚುನಾವಣಾ ಅಕ್ರಮದ ಬಗ್ಗೆ ದಾಖಲೆ ಪ್ರದರ್ಶಿಸಿದರೆ ಅವರಿಗೆ ದೃಢೀಕರಣ ಪತ್ರದ ಮೇಲೆ ಸಹಿಯನ್ನು ಹಾಕಿ ಕೊಡಿ ಎಂದು ನಿರ್ಲಜ್ಜ ಚುನಾವಣಾ ಆಯೋಗ ಕೇಳುತ್ತದೆ, ಆಯೋಗವೇ ಈ ಎಲ್ಲಾ ಕರ್ಮಕಾಂಡದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದ್ದರು ಚುನಾವಣಾ ಆಯೋಗ ದೃಡೀಕರಣ ಕೇಳುವುದು ಹಾಸ್ಯಸ್ಪದವಾಗಿದೆ, ಹಾಗೂ ಕಳ್ಳ ತನ್ನ ವಿರುದ್ಧದ ತನಿಕೆಗೆ ದೂರುದಾರರಿಂದ ದೃಢೀಕರಣ ಕೇಳುತ್ತಿರುವುದಕ್ಕೆ ಏನು ಹೇಳಬೇಕು ಅರ್ಥವಾಗುತ್ತಿಲ್ಲ. 

ಇದೆಲ್ಲದರ ಹೊರತಾಗಿ ಪ್ರಜೆಗಳಾಗಿ ನಾವು ಈ ರಾಜಕೀಯ ಪಕ್ಷಗಳ ಆಚೆ ಯೋಚಿಸುವುದಾದರೆ ಚುನಾವಣಾ ಆಯೋಗ ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿರುವುದು ನಮ್ಮ ನಂಬಿಕೆಗೆ ದ್ರೋಹ ಬಗೆದಂತೆ. ಈ ಬಗ್ಗೆ ನಾವು ಆದಷ್ಟು ಗಹನವಾಗಿ ಯೋಚಿಸಬೇಕಿದೆ. ಇದು ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿ ಅಲ್ಲ ಈ ದೇಶದ ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ ಪಕ್ಷಾತೀತವಾಗಿ ಈ ರೀತಿಯ ಕ್ರಮಗಳ ವಿರುದ್ಧ ನಮ್ಮ ಗಟ್ಟಿ ಧ್ವನಿ ಎತ್ತುವ ಅಗತ್ಯವಿದೆ ಈಗಾಗಲೇ ಬಂಡವಾಳಶಾಹಿಗಳಿಂದಾಗಿ ಪ್ರಜಾಪ್ರಭುತ್ವ ಕಳೆಗುಂದತೊಡಗಿದೆ ಈ ರೀತಿಯ ಅಕ್ರಮವಾದರೆ ಮುಂದೆ ಬಂಡವಾಳ ಶಾಹಿಗಳ ಆಟೋಟೊಪ ಅತಿಯಾಗುತ್ತದೆ, ಈಗ ನಮ್ಮ ನೆಚ್ಚಿನ ಪಕ್ಷ ಈ ರೀತಿಯ ಅಕ್ರಮ ಮಾಡಿ ಗೆದ್ದಿದೆ ಎಂದು ಖುಷಿಯಾದರೆ ಮುಂದೆ ಬಂಡವಾಳ ಶಾಹಿಗಳಾಕ ಕಾಲ ಕೆಳಗೆ ಇರಬೇಕಾಗುತ್ತದೆ ಆ ಮೂಲಕ ನಮ್ಮ ಪ್ರಜಾಪ್ರಭುತ್ವದ ಶವ ಪೆಟ್ಟಿಗೆಗೆ ಕೊನೆಯ ಮೂಳೆ ಹೊಡೆದಂತಾಗುತ್ತದೆ ಹಾಗಾದರೆ ಇದನ್ನು ಹೇಗೆ ಪ್ರತಿಭಟಿಸುವುದು ಎಂದು ಹಲವಾರು ಪ್ರಶ್ನಿಸಿಕೊಳ್ಳಬಹುದು ನೀವು ಪ್ರತಿಭಟಿಸಲು ಬೀದಿಗೆ ಬರುವ ಅವಶ್ಯಕತೆ ಇಲ್ಲ ತಮ್ಮ ಎಲ್ಲರ ಹತ್ತಿರ ಮೊಬೈಲ್ ಇದೆ ಅದರಲ್ಲಿ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದೀರ ಹಾಗಾಗಿ ಅದರಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಹಂಚಿಕೊಳ್ಳಿ, ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಾಗದೇ ಇದ್ದರೆ, ಕೊನೆಯ ಪಕ್ಷ ಲೈಕ್ ಆದರೂ ಮಾಡಿ ಇದರಿಂದಾಗಿ ಈ ಮಾಹಿತಿ ಅತಿ ಹೆಚ್ಚು ಜನಕ್ಕೆ ತಲುಪುತ್ತದೆ ದಯಮಾಡಿ ರಾಜಕೀಯ ನನಗೆ ಏಕೆ ಎಂದು ನಿರ್ಲಕ್ಷ ಮಾಡಬೇಡಿ ನಿಮ್ಮ ಈ ನಿರ್ಲಕ್ಷ ನಮ್ಮ ಮುಂದಿನ ಪೀಳಿಗೆಯನ್ನು ಗುಲಾಮರನ್ನಾಗಿಸುವ ಅಪಾಯದಿಂದ ಕೂಡಿದೆ ಇನ್ನೂ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವ ಜನರಿದ್ದಾರೆ ಎಂಬ ಆಶಾವಾದದಿಂದ ಇದನ್ನು ಮುಕ್ತಾಯಗೊಳಿಸುತ್ತಿದ್ದೇನೆ. 


 ಅದಂ ಖಾನ್ 🖊️ 🖊️