ಗಾಂಧಿ ಎಂಬ ಕಲಿಯುಗದ ಸಂತ
ಗಾಂಧಿಯಂನ್ದೊಡನೆ ನಮಗೆಲ್ಲಾ ರಾಷ್ಟ್ರಪಿತ ಸ್ವಾತಂತ್ರ್ಯ ಹೋರಾಟಗಾರ ರಾಷ್ಟ್ರದ ಅಗ್ರಗಣ್ಯ ನಾಯಕ ಎಂದೆಲ್ಲಾ ನೆನಪಿಗೆ ಬರುತ್ತದೆ. ಗಾಂಧೀಜಿಯವರು ಹುತಾತ್ಮರಾಗಿ 77 ವರ್ಷಗಳು ಕಳೆಯಿತು ಪ್ರತಿ ಬಾರಿ ಗಾಂಧೀಜಿಯ ಹುತಾತ್ಮ ದಿನಾಚರಣೆ ಅಥವಾ ಗಾಂಧಿ ಜಯಂತಿಯಂದು ಅನೇಕ ಸಂಘ ಸಂಸ್ಥೆಗಳು ಗಾಂಧೀಜಿಯವರ ನೆನಪಿನಲ್ಲಿ ಸೌಹಾರ್ದ ಸಮಾರಂಭಗಳನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ, ಇಂತಹ ಸಭೆ ಸಮಾರಂಭಗಳಲ್ಲಿ ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ನೀಡಿದ ಕೊಡುಗೆಗಳ ಬಗ್ಗೆ ಸಾಕಷ್ಟು ವಿವರಣೆಯಲ್ಲಿ ಭಾಷಣಗಳನ್ನು ಮಾಡಲಾಗುತ್ತದೆ. ಆದರೆ ಗಾಂಧೀಜಿಯವರು ಕೇವಲ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ಕಾರ್ಯಗಳಷ್ಟೇ ಗಾಂಧೀಜಿಯನ್ನು ಮಹಾತ್ಮರನ್ನಾಗಿ ಮಾಡುವುದಿಲ್ಲ! ಬದಲಾಗಿ ಗಾಂಧೀಜಿಯಲ್ಲಿ ಇದ್ದಂತಹ ಅಸಾಮಾನ್ಯವಾದ ಮಾನವೀಯ ಮೌಲ್ಯಗಳು ಹಾಗೂ ಅವರು ನಂಬಿದ್ದ ಸಿದ್ಧಾಂತಗಳ ಬಗ್ಗೆ ಅವರಿಗಿದ್ದ ಬದ್ಧತೆಯಿಂದ ಅವರು ಮಹಾತ್ಮಾರಾಗಿದ್ದಾರೆ. ಇದೇ ಕಾರಣದಿಂದ ಅವರು ಕೇವಲ ನಮ್ಮ ದೇಶದಲ್ಲಿ ಅಷ್ಟೇ ಅಲ್ಲದೆ ಇಡೀ ವಿಶ್ವದಲ್ಲಿಯೇ ಗೌರವಿಸಲ್ಪಡುವ ನಾಯಕರಾಗಿದ್ದಾರೆ.
ಗಾಂಧೀಜಿಯವರ ಹೆಸರಿನೊಂದಿಗೆ ಸೌಹಾರ್ದತೆ ಎಂಬ ಪರಿಕಲ್ಪನೆಯು ಬೆಸೆದುಕೊಂಡಿದೆ ನಮ್ಮಲ್ಲಿ ಹಲವಾರು ಜನ ಗಾಂಧೀಜಿಯವರು ಪಾಕಿಸ್ತಾನ ಎಂಬ ಹೊಸ ದೇಶದ ರಚನೆಯನ್ನು ವಿರೋಧಿಸಿದ್ದು ಹಾಗೂ ಹಿಂದೂ ಮುಸ್ಲಿಂ ಏಕತೆಯನ್ನು ಪ್ರತಿಪಾದಿಪಾದಿಸಿದ್ದು ಈ ಸೌಹಾರ್ದತೆ ಎಂಬ ಪರಿಕಲ್ಪನೆ ಅವರೊಂದಿಗೆ ಬೆಸೆದುಕೊಂಡಿರುವುದಕ್ಕೆ ಪ್ರಮುಖ ಕಾರಣ ಎಂದುಕೊಂಡಿದ್ದಾರೆ. ನನ್ನ ಬದುಕೇ ನನ್ನ ಸಂದೇಶ ಎಂದು ಹೇಳಿರುವ ಗಾಂಧೀಜಿಯವರ ಬದುಕನ್ನು, ಅವರ ಬರಹಗಳನ್ನು, ಅವರ ಸಂದೇಶಗಳನ್ನು, ಹಾಗೂ ಅವರ ಹೋರಾಟಗಳನ್ನು ನಾವು ನೋಡಿದರೆ ಸೌಹಾರ್ದತೆ ಎಂಬ ಪರಿಕಲ್ಪನೆಯು ಮೇಲಿನ ಒಂದೇ ಕಾರಣದಿಂದಾಗಿ ಗಾಂಧೀಜಿಯವರ ಹೆಸರಿನೊಂದಿಗೆ ತುಳುಕು ಹಾಕಿಕೊಂಡಿರುವುದಲ್ಲಾ ಎಂದು ಸ್ಪಷ್ಟವಾಗುತ್ತದೆ.
ಗಾಂಧೀಜಿಯವರ ಬದುಕನ್ನು ಹುಟ್ಟಿನಿಂದ ನೋಡುವುದಾದರೆ ವ್ಯಾಪಾರಸ್ಥ ಕುಟುಂಬದಲ್ಲಿ ಜನಿಸಿದ ಗಾಂಧೀಜಿಯವರು ಎಲ್ಲಾ ಮಕ್ಕಳ ಹಾಗೆ ಕೌತುಕವನ್ನು ತನ್ನಲ್ಲಿ ತುಂಬಿಕೊಂಡಿದ್ದರು ಇದೇ ಕಾರಣದಿಂದಾಗಿ ತನ್ನ ಕುಟುಂಬ ಸಸ್ಯಹರಿಯಾಗಿದ್ದರು ಮಾಂಸಾಹಾರದ ಸೇವನೆಯನ್ನು ಮಾಡಿದ್ದು ಹಾಗೂ ಮುಂದೆ ಪ್ರಾಣಿ ಹಿಂಸೆಯನ್ನು ಮಾಡಬಾರದು ಎಂದು ಅಹಿಂಸಾ ತತ್ವವನ್ನು ರೂಢಿಸಿಕೊಂಡಿದ್ದು, ಮನೆಯಲ್ಲಿ ಇಟ್ಟಿದ್ದ ಹಣವನ್ನು ಯಾರಿಗೂ ಹೇಳದೆ ತೆಗೆದುಕೊಂಡು ಸುಳ್ಳನ್ನು ಹೇಳಿ ಪೇಚಿಗೆ ಸಿಲುಕಿದ್ದರು ಹಾಗೂ ಮುಂದೆ ಇನ್ಯಾವತ್ತೂ ಸುಳ್ಳನ್ನು ಹೇಳುವುದಿಲ್ಲ ಎಂದು ಸತ್ಯದೆಡೆಗೆ ನಡೆದರು. ಹೀಗೆ ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯನ್ನು ತನ್ನ ಜೀವನದಲ್ಲಿ ರೂಡಿಸಿಕೊಂಡರು.
ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋದ ಗಾಂಧೀಜಿಯವರಿಗೆ ಭಾರತದಲ್ಲಿನ ಸಾಮಾಜಿಕ ವ್ಯವಸ್ಥೆ, ಅಸ್ಪೃಶ್ಯತೆಯ ಆಚಾರಣೆಗಳ ಬಗ್ಗೆ ತಿಳುವಳಿಕೆ ಕಡಿಮೆ ಇತ್ತು ಎಂಬುದು ಅವರ ಆತ್ಮ ಚರಿತ್ರೆಯಿಂದ ಗೊತ್ತಾಗುತ್ತದೆ. ಯೌವ್ವನಾವ್ಯವಸ್ಥೆಯಲ್ಲಿ ಯುವಕರಿಗೆ ಇರುವಂತೆ ಚಂಚಲತೆಯು ಗಾಂಧೀಜಿಯಲ್ಲಿಯೂ ಇತ್ತು ಎಂಬುದು ಅವರು ಲಂಡನ್ನಿನಲ್ಲಿದ್ದಾಗ ಅನೇಕ ಮತಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಬೇರೆ ಬೇರೆ ವಿಚಾರಗಳ ಬಗ್ಗೆ ತಿಳಿಯಲು ಹಾಕುತ್ತಿದ್ದ ಶ್ರಮದಿಂದ ಗೊತ್ತಾಗುತ್ತದೆ. ಹೀಗೆ ಎಲ್ಲಾ ಧರ್ಮ ಮತ ಪಂಥಗಳ ಬಗ್ಗೆ ಅವರು ಗೌರವಿಸುವುದನ್ನು ಕಲಿತುಕೊಳ್ಳುತ್ತಾರೆ.
ಅವರು ದಕ್ಷಿಣ ಆಫ್ರಿಕಕ್ಕೆ ಕೆಲಸಕ್ಕೆಂದು ಹೋದಾಗ ಮೊದಲ ಬಾರಿಗೆ ಅವರಿಗೆ ಮೇಲು ಕೀಳು ಎಂಬ ಸಮಾಜದ ವರ್ಗೀಕರಣ ಕಣ್ಣಿಗೆ ಬೀಳುತ್ತದೆ. ಈ ವರ್ಗಿಕರಣದ ಭಾಗವಾಗಿ ತಾವು ಸ್ವತಃ ಕೂಡ ಶೋಷಣೆಗೆ ಒಳಗಾಗಿ ಈ ಶೋಷಣೆಯ ವಿರುದ್ಧ ಹೋರಾಟವನ್ನು ರೂಪಿಸುತ್ತಾರೆ. ಇವರ ಹೋರಾಟಕ್ಕೆ ಮಣಿದ ಸರ್ಕಾರವು ಅನೇಕ ಕಾನೂನುಗಳನ್ನು ಜಾರಿಗೆ ತರುತ್ತದೆ. ಹೀಗೆ ಮಾನವೀಯ ಮೌಲ್ಯಗಳನ್ನು ತಮ್ಮಲ್ಲಿ ರೂಡಿಸಿಕೊಳ್ಳುತ್ತಾರೆ. ಮುಂದೆ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಾಗ ಸ್ವತಂತ್ರ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಗಾಂಧೀಜಿಯವರು ಗೋಪಾಲಕೃಷ್ಣ ಗೋಖಲೆಯವರ ಮಾತಿನಿಂದ ಪ್ರೇರಿಪಿತರಾಗಿ ಭಾರತವನ್ನು ತಿಳಿಯಲು ಭಾರತಾದ್ಯಂತ ಪ್ರವಾಸವನ್ನು ಮಾಡುತ್ತಾರೆ.
ಹೀಗೆ ಭಾರತದಾದ್ಯಂತ ಜಡ್ಡು ಹಿಡಿದಿರುವ ಜಾತಿ ವ್ಯವಸ್ಥೆ ಹಾಗೂ ಭಾರತೀಯ ಸಮಾಜವು ವಿವಿಧ ಮತ, ಪಂಥ, ಜಾತಿ, ಭಾಷೆ, ಇವುಗಳ ಆಧಾರದಲ್ಲಿ ವಿಭಜಿಸಿರುವುದು ತಿಳಿಯುತ್ತದೆ. ವಿಭಜಿಸಲ್ಪಟ್ಟಿರುವ ಭಾರತದಲ್ಲಿ ಏಕತೆಯ ಮಂತ್ರವನ್ನು ಜಪಿಸುತ್ತಾ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ ಇದು ಗಾಂಧೀಜಿಯಲ್ಲಿರುವ ಮಾನವೀಯತೆಗೆ ಮತ್ತೊಂದು ಸಾಕ್ಷೀ. ಇದರ ಭಾಗವಾಗಿ 1931 ರಲ್ಲಿ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರವನ್ನು ನೀಡಲು ಗಾಂಧೀಜಿಯವರು ಒಪ್ಪುವುದಿಲ್ಲ, ಗಾಂಧೀಜಿಯವರ ಈ ನಿಲುವಿನಿಂದ ಅಂಬೇಡ್ಕರ್ ರವರು ಗಾಂಧೀಜಿಯನ್ನು ಕಟುವಾಗಿ ಟೀಕಿಸುತ್ತಾರೆ. ಈ ಟೀಕೆಗಳಿಂದ ವಿಚಲಿತರಾಗದೆ ಮುಂದೆ ದಲಿತರ ಕ್ಷೇಮಾಭಿವೃದ್ಧಿಗೆ ಹಾಗೂ ಅಸ್ಪೃಶ್ಯತೆ ನಿವಾರಣೆಗೆ ಅನೇಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾರೆ ಹೀಗೆ ದಲಿತರನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸುತ್ತಾರೆ. ಈ ಎಲ್ಲಾ ಕಾರ್ಯಗಳಿಂದ ಗಾಂಧೀಜಿಯವರು ಬೇರೆಯವರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ ಹಾಗೂ ಅವರಲ್ಲಿರುವ ಮಾನವೀಯ ಮೌಲ್ಯಗಳನ್ನು ಜಗಜ್ಜಾಹೀರು ಪಡಿಸುತ್ತಾರೆ. ಮುಂದೆ ನಮಗೆ ಸ್ವಾತಂತ್ರ್ಯ ದೊರೆತಾಗ ಎಲ್ಲಾ ರೀತಿಯ ಐಷಾರಾಮಿ ಬದುಕು ಹಾಗೂ ಅಧಿಕಾರವನ್ನು ಅನುಭವಿಸುವ ಅವಕಾಶವಿದ್ದರೂ ತಾನು ನಂಬಿರುವ ಮಾನವೀಯ ಮೌಲ್ಯಗಳಿಂದಾಗಿ, ಗಲಭೆಗಳನ್ನು ತಡೆಯಲು ಬೀದಿಗಳಲ್ಲಿ ಅಲೆಯುತ್ತಾರೆ. ಈ ಎಲ್ಲಾ ಕಾರಣಗಳು ಗಾಂಧೀಜಿ ಅವರನ್ನು ಮಹಾತ್ಮರನ್ನಾಗಿಸುತ್ತದೆ ಹಾಗೂ ಇಡೀ ಜಗತ್ತಿನಲ್ಲಿ ಯಾರಿಗೂ ಸಿಗದ ಮನ್ನಣೆಯನ್ನು ದೊರಕಿಸಿಕೊಡುತ್ತದೆ ಇದು ನಮ್ಮ ಕಲಿಯುಗದ ಸಂತನ ಕಥೆ......
👏🏻👏🏻
ReplyDelete🙏
DeleteSuper
ReplyDelete🙏
DeleteShort and sweet👌reality of his life.
ReplyDeleteKeep going...👍
🙏
DeleteGood valid point
ReplyDelete🙏
DeleteSo nice👌👌👌
ReplyDelete🙏
Delete