Saturday, 26 March 2022

ಅಡುಗೆ ಮನೆಯಲ್ಲಿರುವ ಏಕಸೌಮ್ಯ ಮುಕ್ತಾಯವಾದರೆ ನಿಜವಾದ ಮಹಿಳಾಸಬಲೀಕರಣ ಆದಹಾಗೆ!!!

ನಾವು ಅನಾಗರೀಕತೆಯಿಂದ, ನಾಗರೀಕತೆಯಡೆಗೆ ಬಹುದೂರ ಕ್ರಮಿಸಿದ್ದೇವೆ. ಈ ಪ್ರಯಾಣದ ಕಾಲಘಟ್ಟದಲ್ಲಿ ಜೈವಿಕವಾಗಿ ಸಾಕಷ್ಷು  ಬದಲಾಗಿದ್ದೇವೆ. ‘ಬದಲಾವಣೆ ಜಗದ ನಿಯಮ’ ಈ ನಿಯಮಕ್ಕೆ ತಕ್ಕಂತೆ ಮಾನವ ಸಾಕಷ್ಟು ಅನಿಷ್ಠ ಪದ್ಧತಿಗಳನ್ನು ರೂಢಿಸಿಕೊಂಡು, ಕ್ರಮೇಣ ಅಂತಹ ಅನಿಷ್ಠ ಪದ್ಧತಿಗಳಿಂದ ತನ್ನನ್ನು ತಾನು ದೂರ ಮಾಡಿ ಹಲವಾರು ಬಾಲಿಶ ಆಚರಣೆಗಳನ್ನು ತ್ಯಜಿಸಿದ್ದಾನೆ. ಇಪ್ಪತ್ತೊಂದನೇ ಶತಮಾನದಲ್ಲಿರುವ ಮಾನವನಿಗೆ ಹಾಗೂ ಆದಿಮಾನವನಿಗೆ ಅಜಗಜಾಂತರ ವ್ಯತ್ಯಾಸವನ್ನು ನಾವು ಇಂದು ಕಾಣಬಹುದಾಗಿದೆ.

ಮಾನವನು ರೂಡಿಸಿಕೊಂಡ ಸಾಕಷ್ಟು ಪದ್ಧತಿಗಳಲ್ಲಿ ಬಲಿಷ್ಠನಾದವನು ಬಲಹೀನನಿಗೆ ಶೋಷಣೆ ಮಾಡುವುದು ಸೇರಿದ್ದೀತು, ಇದು ಮುಂದೆ ಸಾಗಿ ಪುರುಷರು ತಮಗೆ ಜೈವಿಕವಾಗಿ ದೊರಕಿದ ಬಲವನ್ನು ಮಹಿಳೆಯರ ಮೇಲೆ ಅಧಿಕಾರ ಚಲಾಯಿಸಲು ಬಳಸಿಕೊಳ್ಳಲಾರಂಭಿಸಿದರು. ಇದರ ಭಾಗವಾಗಿ ಮಹಿಳೆಯರು ಶೋಷಣೆಗೆ ಒಳಗಾಗುತ್ತ ಬಂದಿದ್ದಾರೆ ಕಾಲ ಬದಲಾದಂತೆ ಪ್ರಪಂಚದ ಬೇರೆ ಬೇರೆ ಭಾಗದ ನಾಗರೀಕತೆಗಳು ಸಮ್ಮಿಲನಗೊಳಪಟ್ಟ ನಂತರ ಮಾನವನ ಸಾಮಾಜಿಕ ಜೀವನದಲ್ಲಿ ಕೆಲವು ಬದಲಾವಣೆಗಳು ಆಗತೊಡಗಿತು. ಈ ಸ್ವಾಭಾವಿಕ ಬೆಳವಣಿಗೆಗಳೊಂದಿಗೆ ಮಹಿಳೆಯರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳು ಕಡಿಮೆಯಾಗತೊಡಗಿತು.

19ನೇ ಶತಮಾನದ ಕೊನೆಯ ಭಾಗದಲ್ಲಿ ಮಹಿಳೆಯರ ಸಬಲೀಕರಣದ ಕೂಗು ಜೋರನ್ನು ಪಡೆಯಿತು ಸಾಕಷ್ಟು ಕವಯತ್ರಿಯರು ಮಹಿಳೆಯರ ಸಮಾನತೆಯ ಬಗ್ಗೆ ದಿಟ್ಟತನದಿಂದ ಬರೆಯಲಾರಂಬಿಸಿದರು ಇದರ ಫಲವಾಗಿ ಅನೇಕ ಕವಯತ್ರಿಯರು  ಸ್ರ್ತೀವಾದ (ಫೆಮಿನಿಸಂ) ಎಂಬ ಪದವನ್ನು ಸಮಾನತೆಯ ಕ್ರಾಂತಿಗಾಗಿ ಟಂಕಿಸಿದರು. ಸ್ರ್ತೀವಾದವು ಪ್ರಾಥಮಿಕವಾಗಿ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಪುರುಷಕೇಂದ್ರಿತವಾದ ಸಂಸ್ಕೃತಿಯ ಮನಸ್ಥಿತಿಯಡೆಗೆ ಗಮನಸೆಳೆಯುವುದಾಗಿದೆ. ಹಾಗಾಗಿ ಸ್ತ್ರೀವಾದ ಸಿದ್ಧಾಂತವು, ಹೇಗೆ ಲಿಂಗಗಳ ನಡುವೆ ಅಸಮಾನತೆಯನ್ನು ಕಾಪಾಡಿಕೊಂಡು ಬರಲಾಗಿದೆ ಎಂದು ಪ್ರಸ್ತುತಪಡಿಸಲು ಪ್ರಯತ್ನಿಸುತ್ತದೆ.

ಸ್ತ್ರೀವಾದವು  ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಪ್ರಾರಂಭಿಸಿದ ಫಲವಾಗಿ ಅನೇಕ ಮಹಿಳೆಯರು ಮುಂದೆ ಬಂದು ಪ್ರತಿಯೊಂದು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ಹಾಗೂ ಮನೆ ಮತ್ತು ತಮ್ಮ ಕಾರ್ಯಕ್ಷೇತ್ರ ಎರಡನ್ನೂ ನಿಭಾಯಿಸುತ್ತಿದ್ದಾರೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಕಾಣಿಸತೊಡಗಿದ ನಂತರ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ, ಹಾಗೂ ಪುರುಷರಿಗೆ ಸಮಾನವಾಗಿ ಮಹಿಳೆಯರು ಕೂಡ ತಮ್ಮದೆಯಾದ ರೀತಿಯಲ್ಲಿ ಮುಂದಿನ ಪೀಳಿಗೆಗೆ ಸಾಕಷ್ಟು ಪ್ರಮಾಣದಲ್ಲಿ ಕೊಡುಗೆಯನ್ನು ನೀಡುತ್ತಿದ್ದಾರೆ.  ಇಂತಹ ಕಾಲದಲ್ಲಿ ಅವರಿಗೆ ಕಾಡುತ್ತಿರುವ ಬಹುಮುಖ್ಯ ತೊಂದರೆಯೆಂದರೆ ಮನೆ ಮತ್ತು ತಮ್ಮ ಕಾರ್ಯಕ್ಷೇತ್ರ ಎರಡನ್ನೂ ನಿಭಾಯಿಸುವುದು. ಈ ಮನೆ ನಿಭಾಯಿಸುವುದೆಂದರೆ ಅವಿವಾಹಿತ ಮಹಿಳೆಯರು ಅಪ್ಪ-ಅಮ್ಮ, ತಮ್ಮ, ತಂಗಿಯರಿಗೆ, ಹಾಗೂ ವಿವಾಹಿತ ಮಹಿಳೆಯರು ಪತಿ, ಅತ್ತೆ-ಮಾವ, ಮತ್ತು ತಮ್ಮ ಮಕ್ಕಳನ್ನು ನಿಭಾಯಿಸುವುದರ ಜೊತೆ ಜೊತೆಯಾಗಿ, ಅಡುಗೆಮನೆಯಲ್ಲಿ ತಮ್ಮ ಬಿಡುವಿಲ್ಲದ ಸಮಯದಲ್ಲಿ ಹೊಂದಣಿಕೆ ಮಾಡಿಕೊಂಡು ಮನೆಮಂದಿಗೆಲ್ಲಾ ರುಚಿಯಾದ ಅಡುಗೆ ಮಾಡುವುದಾಗಿದೆ. ಮಹಿಳೆಯರು ಇದನ್ನು ತಮ್ಮ ಆತ್ಮ ಸಂತೃಪ್ತಿಗೆ ಮಾಡುತ್ತೀರುವರಾದರು, ಇದು ಕೇವಲ ಮಹಿಳೆಯರೇ ಮಾಡಬೇಕಾದ ಕಾರ್ಯ ಎಂದು ಭಾವಿಸಿ ಅಡುಗೆಮನೆಯ ಏಕಸೌಮ್ಯವನ್ನು ಮಹಿಳೆಯರ ಹಣೆಪಟ್ಟಿಗೆ ಕಟ್ಟುವುದು ಪುರುಷ ಪ್ರಧಾನ ಸಮಾಜದ ಶೋಷಣೆ ಅಲ್ಲದಿದ್ದಾರೆ ಮತ್ತೇನು.

ಗಂಡನ ಹಾಗೆ ಹೆಂಡತಿಯೂ ಕೆಲಸ ಮಾಡಿ ಮನೆಗೆ ಮರಳಿದ ಮೇಲೆ ಇಬ್ಬರು ಸೇರಿ ಅಡುಗೆ ಮನೆಯ ಕಾರ್ಯವನ್ನು ಸಂತೋಷದಿಂದ ನಿಭಾಯಿಸಿದರೆ ಮಹಿಳೆಯರಿಗೂ ಕೂಡ ಹೊರಗಿನ ಜಂಜಾಟದಿಂದ ಕೊಂಚ ಸಮಯ ಮುಕ್ತಿ ದೊರೆಯುತ್ತದೆ, ಹಾಗೂ ಸಾಧಿಸಬೇಕಾಗಿರುವ ಗುರಿಯ ಕಡೆ ಗಮನ ಹರಿಸಲು ಸಾದ್ಯವಾಗುತ್ತದೆ. ಇದು ಸಾದ್ಯವಾಗದ ಹೊರತು ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಯ ಮಾತು ಮರೀಚಿಕೆಯಾಗಿ ಉಳಿಯುತ್ತದೆ. ಹಾಗಾಗಿ ಪ್ರಪಂಚದ ಅರ್ಧದಷ್ಟು ಜನರ ನಿಜವಾದ ಏಳಿಗೆಗಾಗಿ ನಾವು ಸಮಾಜದಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಅಡುಗೆಮನೆಯಲ್ಲಿ ತೊಡಗಿಸಿಕೊಳ್ಳಲು ಪುರುಷರಿಗೆ ಪ್ರೇರೇಪಿಸಿ ಅಡುಗೆ ಮನೆಯಲ್ಲಿರುವ ಮಹಿಳೆಯರ ಏಕಸ್ವಾಮ್ಯವನ್ನು ಕೊನೆಗಾಣಿಸುವುದರೊಂದಿಗೆ ಅವರ ನಿಜವಾದ ಏಳಿಗೆಗೆ ಕಾರಣೀಭೂತರಾಗಬೇಕಾಗಿದೆ.


20 comments:

  1. Such thoughts from a man is very rare n am so happy to read this n felt so relaxed that there r ppl who still think this!!!!

    ReplyDelete
  2. It will b vry good development...if it happens in future 😊

    ReplyDelete
  3. Yes it's really good and developed a good relationship

    ReplyDelete
  4. ಇದು ನಿಜವಾಗಲು ಒಳ್ಳೆ ಯೋಚನೆ, ಎಲ್ಲರೂ ಇದನ್ನು ರೂಢಿಸಿಕೊಳ್ಳಬೇಕು.ಇದನ್ನು ಕಾರ್ಯರೂಪಕ್ಕೆ ತಂದಿರುವವರನ್ನು ನೋಡಿದ್ದೇನೆ,ಮೊದಲಿಗೆ ಕಷ್ಟವಾದರೂ ಈಗ ಖುಷಿಯಿಂದ ಇದ್ದರೆ.

    ReplyDelete
    Replies
    1. ಮೇಲಿನ Blog ಅನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಧನ್ಯವಾದಗಳು.

      Delete
  5. It's good development and it establish a good relationship

    ReplyDelete