ಮಾನಗೆಟ್ಟ ಸಂಸದನೊಬ್ಬ ವಿರೋಧ ಪಕ್ಷದ ನಾಯಕರ ಜಾತಿಯನ್ನು ಕೇಳುತ್ತಾನೆ, ಲಜ್ಜೆಗೆಟ್ಟ ಮಹಾಪ್ರಭುಗಳು ಅದನ್ನು ಟ್ವಿಟ್ಟರಿನಲ್ಲಿ ಹಂಚಿಕೊಳ್ಳುತ್ತಾರೆ. ಜಾತಿ ನಿರ್ಮೂಲನೆಯು ಹೇಗೆ ಸಾಧ್ಯ ಎಂಬುದನ್ನು ಡಾಕ್ಟರ್ ಬಿ. ಆರ್ ಅಂಬೇಡ್ಕರ್ ರವರು ತಮ್ಮ ಪುಸ್ತಕ ವಾದ ಇನ್ಹಲೇಶನ್ ಆಫ್ ಕ್ಯಾಸ್ಟ್ ಎಂಬ ಪುಸ್ತಕದಲ್ಲಿ ವಿವರವಾಗಿ ತಿಳಿಸಿದ್ದಾರೆ ಇದಕ್ಕೆ ತಾಜಾ ಉದಾಹರಣೆಯೇ ನೆಹರುರವರ ಕುಟುಂಬ. ಮೋತಿಲಾಲ್ ನೆಹರು, ಕಾಶ್ಮೀರಿ ಪಂಡಿತರು (ಬ್ರಾಹ್ಮಣ) ಇವರ ಪತ್ನಿ ಸ್ವರೂಪರಾಣಿ, ಕಾಶ್ಮೀರಿ ಪಂಡಿತರು (ಬ್ರಾಹ್ಮಣ) ಇವರಿಬ್ಬರ ಮೊದಲನೆಯ ಮಗನೇ ಪಂಡಿತ್ ಜವಹರಲಾಲ್ ನೆಹರು ಕಾಶ್ಮೀರಿ ಪಂಡಿತ (ಬ್ರಾಹ್ಮಣ) ಇವರ ಪತ್ನಿ ಕಮಲ ನೆಹರು, ಬ್ರಾಹ್ಮಣ. ಇವರ ಮಗಳು ಇಂದಿರಾಗಾಂಧಿ ಕಾಶ್ಮೀರಿ ಪಂಡಿತರು (ಬ್ರಾಹ್ಮಣ) ಇವರ ಪತಿ ಫೈರೋಜೆ ಗಾಂಧಿ ಇವರು ಪಾರ್ಸಿ ಸಮುದಾಯಕ್ಕೆ ಸೇರಿದವರು. ಇವರ ಮಕ್ಕಳಾದ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿಯವರು ಹಿಂದೂ ಧರ್ಮವನ್ನು ಆಚರಣೆ ಮಾಡುತ್ತಿದ್ದರಿಂದ ಅವರು ಬ್ರಾಹ್ಮಣರಾದರೂ ಆಗಬಹುದು ಅಥವಾ ಪಾರ್ಸಿ ಸಮುದಾಯಕ್ಕಾದರೂ ಸೇರಬಹುದು. ರಾಜೀವ್ ಗಾಂಧಿಯವರು ಮದುವೆಯಾದದ್ದು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಸೋನಿಯಾ ಗಾಂಧಿಯನ್ನು. ಇವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರು ಹಿಂದೂ ಧರ್ಮವನ್ನು ಆಚರಣೆ ಮಾಡುತ್ತಿದ್ದಾರೆ. ಇವರು ಯಾವ ಜಾತಿಗೆ ಸೇರಿದವರೆಂದು ತಾವೇ ನಿರ್ಧರಿಸಿ. ಇದೇ ರೀತಿ ಅಂತರ್ಜಾತಿ ವಿವಾಹಗಳಾದರೆ ಜಾತಿ ನಿರ್ಮೂಲನೆ ಸಾಧ್ಯವೆಂದು ಅಂಬೇಡ್ಕರ್ ರವರು ತಮ್ಮ ಪುಸ್ತಕದಲ್ಲಿ ವಿವರಿಸಿರುವುದು.
No comments:
Post a Comment